50 ಮ್ಯೂಚುವಲ್  ಫಂಡ್  ಯೋಜನೆಗಳು  ಈ ವರ್ಷ ತಮ್ಮ ಯೋಜನೆಯನ್ನು ಪ್ರಾರಂಭಿಸಿ 25ವರ್ಷಗಳನ್ನು ಪೂರೈಸಿರುತ್ತವೆ. - Angel investments

50 ಮ್ಯೂಚುವಲ್  ಫಂಡ್  ಯೋಜನೆಗಳು  ಈ ವರ್ಷ ತಮ್ಮ ಯೋಜನೆಯನ್ನು ಪ್ರಾರಂಭಿಸಿ 25ವರ್ಷಗಳನ್ನು ಪೂರೈಸಿರುತ್ತವೆ.

ಈ 50 ಮ್ಯೂಚುವಲ್ ಫಂಡ್ ಯೋಜನೆಗಳು ಎಷ್ಟು ಶೇಕಡವಾರು ಆದಾಯವನ್ನು ನೀಡಿರ ಬಹುದು.?

ಪ್ರತಿದಿನ ಹಲವಾರು ಹೊಸ ಮ್ಯೂಚುವಲ್ ಫಂಡ್ ಯೋಜನೆಗಳು ಮಾರುಕಟ್ಟೆಗೆ ಬರುತ್ತಿರುವ ಸಮಯದಲ್ಲಿ. ಈ ವರ್ಷ ಭಾರತೀಯ ಮ್ಯೂಚುವಲ್ ಫಂಡ್ ಉಧ್ಯಮದಲ್ಲಿ 50 ಮ್ಯೂಚುವಲ್ ಫಂಡ್ ಯೋಜನೆಗಳು 25ವರ್ಷಗಳ ತಮ್ಮ ಸೇವೆಯನ್ನು ಪೂರೈಸಿವೆ.

ಈ 50ಮ್ಯೂಚುವಲ್‌ಫಂಡ್ ಯೋಜನೆಗಳಲ್ಲಿ ಸುಮಾರು
• 8 ಹೈಬ್ರಿಟ್ ಮ್ಯೂಚುವಲ್ ಫಂಡ್‌ಗಳು
• 11 ಡೆಟ್ ಮ್ಯೂಚುವಲ್ ಫಂಡ್‌ಗಳು ಮತ್ತು
• 31 ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಾಗಿರುತ್ತವೆ.

ಈ ಮೇಲ್ಕಂಡ ಫಂಡ್‌ಗಳಲ್ಲಿ ಅತ್ಯಂತ ಹಳೆಯ ಈಕ್ವಿಟಿ ಮ್ಯೂಚುವಲ್ ಫಂಡ್ ಯು.ಟಿ.ಐ ಮಾಸ್ಟರ್ ಶೇರ್ ಫಂಡ್ ಇದು ಲಾರ್ಜ್ಕ್ಯಾಪ್ ಫಂಡ್ ಆಗಿದ್ದು ಇದನ್ನು 1986ರಲ್ಲಿ ಪ್ರಾರಂಭಿಸಿಲಾಯಿತು. ಮತ್ತು ಡೆಟ್ ಮ್ಯೂಚುವಲ್ ಫಂಡ್‌ಗಳವಿಭಾಗದಲ್ಲಿ ಜೆ.ಎಮ್ ಮಧ್ಯಮ & ದೀರ್ಘಾವಧಿಯ ಯೋಜನೆಯುಗಿದ್ದು ಇದನ್ನು 1995ರಲ್ಲಿ ಪ್ರಾರಂಭಿಸಿಲಾಯಿತು. ಹಾಗೂ ಹೈಬ್ರಿಟ್ ಮ್ಯೂಚುವಲ್ ಫಂಡ್‌ಗಳ ವಿಭಾಗದಲ್ಲಿ ಕೆನರಾ ರೊಬೆಕೊ ಇಕ್ವಿಟಿ ಹೈಬ್ರಿಡ್ ಫಂಡ್ ಅತ್ಯಂತ ಹಳೆಯ ಮ್ಯೂಚುವಲ್ ಫಂಡ್ ಅಗಿದ್ದು ಇದನ್ನು 1993ರಲ್ಲಿ ಪ್ರಾರಂಭಿಸಿಲಾಯಿತು.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು :-

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಕಳೆದ 25ವರ್ಷಗಳಿಂದ ಶೇಕಡವಾರು 8% ನಿಂದ 23% ವರೆಗಿನ ಆದಾಯ ಆಥಾವ ರಿಟನ್ಸ್ಅನ್ನು ನೀಡಿದೆ. ಆದಾಗ್ಯೂ ಹೆಚ್ಚಿನ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಪ್ರಾರಂಭದಿAದ ಎರಡು ಅಂಕಿಯ ಆದಾಯ ಆಥಾವ ರಿಟನ್ಸ್ ಅನ್ನು ನೀಡಿರುತ್ತದೆ.

ಉ.ದಾ:-
ಹೆಚ್.ಡಿ.ಎಫ್.ಸಿ ಟ್ಯಾಕ್ಸ್ ಸೇವರ್ ಫಂಡ್ ಪ್ರಾರಂಭದಿoದಲೂ 23% ಶೇಕಡವಾರು ಆದಾಯವನ್ನು ನೀಡಿ ಆಗ್ರ ಸ್ಥಾನದಲ್ಲಿದೆ. ಮತ್ತು ಈ ಫಂಡ್‌ನ್ನು 1996ರಲ್ಲಿ ಪ್ರಾರಂಭಿಸಲಾಯಿತು. ನಿಪ್ಪನ್ ಇಂಡಿಯಾ ಗ್ರೋತ್ ಫಂಡ್ ಪ್ರಾರಂಭದಿAದಲೂ 22% ಶೇಕಡವಾರು ಆದಾಯವನ್ನು ನೀಡಿ ದ್ವಿತೀಯ ಸ್ಥಾನದಲ್ಲಿದೆ ಮತ್ತು ಈ ಫಂಡ್‌ನ್ನು 1995ರಲ್ಲಿ ಪ್ರಾರಂಭಿಸಲಾಯಿತು.

ಹೈಬ್ರಿಟ್ ಮ್ಯೂಚುವಲ್ ಫಂಡ್‌ಗಳು

25ವರ್ಷಗಳನ್ನು ಪೂರೈಸಿದ 8ಹೈಬ್ರಿಟ್ ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಯಲ್ಲಿವೆ ಈ ಮ್ಯೂಚುವಲ್ ಫಂಡ್‌ಗಳು ಪ್ರಾರಂಭದಿAದಲೂ 7% ರಿಂದ 18% ವರೆಗಿನ ಆದಾಯ ಆಥಾವ ರಿಟನ್ಸ್ ಅನ್ನು ನೀಡಿದೆ. ಆದಾಗ್ಯೂ ಸಹ ಹೆಚ್ಚಿನ ಹೈಬ್ರಿಟ್ ಮ್ಯೂಚುವಲ್ ಫಂಡ್‌ಗಳು ಪ್ರಾರಂಭದಿAದ ಎರಡು ಅಂಕಿಯ ಆದಾಯ ಆಥಾವ ರಿಟನ್ಸ್ ಅನ್ನು ನೀಡಿ ಅಗ್ರಸ್ಥಾನದಲ್ಲಿರುತ್ತವೆ.

ಉ.ದಾ:- ಆದಿತ್ಯ ಬಿ.ಎಸ್.ಎಲ್ ಇಕ್ವಿಟಿ ಹೈಬ್ರಿಟ್95ಫಂಡ್ ಆರಂಭದಿAದ ಶೇಕಡವಾರು18% ಆದಾಯವನ್ನು ನೀಡಿರುತ್ತದೆ.

ಡೆಟ್ ಮ್ಯೂಚುವಲ್ ಫಂಡ್‌ಗಳು :-

ಮ್ಯೂಚುವಲ್ ಫಂಡ್ ಉದ್ಯಮದ ವಿಭಾಗದಲ್ಲಿ ಅತ್ಯಂತ ಹಳೆಯ ಡೆಟ್ ಮ್ಯೂಚುವಲ್ ಫಂಡ್ ಜೆ.ಎಮ್ ಮಧ್ಯಮ ದಿಂದ ದೀರ್ಘಾವಧಿಯ ಯೋಜನೆಯಾಗಿದೆ. ಆದಾಗ್ಯೂ ಸಹ ಈ ಯೋಜನೆಯು ಈಗ ಯಾವುದೇ ರೀತಿಯ ಹೊಸ ಹೊಡಿಕೆಯನ್ನು ಸ್ವೀಕರಿಸುತ್ತಿಲ್ಲ. ಮತ್ತು ಆದಿತ್ಯ ಬಿರ್ಲಾಸನ್ ಲೈಫ್ ಫಂಡ್ ದೀರ್ಘಾವಧಿಯ ಯೋಜನೆಯಾಗಿದೆ ಈ ಮ್ಯೂಚುವಲ್ ಫಂಡ್ ಜೆ.ಎಮ್‌ಮಧ್ಯಮ ದಿಂದ ದೀರ್ಘಾವಧಿಯ ಯೋಜನೆ ಮ್ಯೂಚುವಲ್ ಫಂಡ್‌ನಷ್ಟು ಹಳೆಯದಾಗಿದೆ ಅದರೂ ಸಹ ಹೊಡಿಕೆಗೆ ಮುಕ್ತವಾಗಿದೆ. ಈ ಎರಡು ಯೊಜನೆಗಳನ್ನು 1995ರಲ್ಲಿ ಪ್ರಾರಂಭಿಸಲಾಯಿತು.

ಉ.ದಾ :-
ಆದಿತ್ಯ ಬಿರ್ಲಾಸನ್ ಲೈಫ್ ಕಾರ್ಪೂರೇಟ್ ಬಾಂಡ್ ಫಂಡ್ ಮತ್ತು ಆದಿತ್ಯ ಬಿರ್ಲಾ ಸನ್ ಲೈಫ್ ಇನ್‌ಕಾಮ್ ಫಂಡ್ ಪ್ರಾರಂಭದಿAದಲೂ ಶೇಕಡವಾರು 9% ಆದಾಯ ಆಥಾವ ರಿಟನ್ಸ್ನ್ನು ನೀಡಿ ಈ ಪಟ್ಟಿಯಲ್ಲಿ ಆಗ್ರ ಸ್ಥಾನದಲ್ಲಿದೆ.

About The Author

Leave a Comment

Your email address will not be published. Required fields are marked *

Scroll to Top